Articles Comments

ಇಂದಿನ ವಿಶೇಷ!

ಬಾಳೊಂದು ಕನಸಿನ ಲೋಕ

ಬಸ್ಸು ಹೊರಡುವ ಸಮಯವಾಯ್ತು. ಜೇಬಿನೊಳಗೆ ಎರಡೂ ಕೈಗಳನ್ನು ಇಳಿಬಿಟ್ಟು ನಿಂತಿದ್ದ ಶಂಕರನನ್ನೇ ಕಿಟಕಿಯಿಂದ ದಿಟ್ಟಿಸಿದಳು ಸುಮಿತ್ರಾ. ಆ ನಿರ್ಭಾವದ ಮುಖದಲ್ಲಿ ಯಾವ ವೇದನೆಯ ಎಳೆಯನ್ನು ಅವಳಿಂದ ಹುಡುಕಲಾಗಲಿಲ್ಲ. ಮರುಕ್ಷಣವೇ ಮನಸ್ಸು ನಿರಾಶೆಗೊಂಡಿತು. ಅವಳಿಗರಿವಿಲ್ಲದೇ ಕಣ್ತುಂಬಿಕೊಂಡಿತು. … ಮುಂದೆ ಓದಿ... »

ನಾಲ್ಕು ಪ್ರಶ್ನೆಗಳಿಗೆ ಉತ್ತರ

ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು. ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ … ಮುಂದೆ ಓದಿ... »

ಹೊಸತು! ಹೊಸತು!!

ನಗೆ ಡಂಗುರ – ೧೦೭

“ವಿವಾಹ ಬಂಧನಕ್ಕೂ ಪೋಲೀಸ್ ಬಂಧನಕ್ಕೂ ವ್ಯತಾಸ ಹೇಳು ನೋಡೋಣ” ಶಾಮಣ್ಣ ಕೇಳಿದ.
ಶೀನಣ್ಣ: ಪೋಲೀಸ್ ಬಂಧನವಾದಲ್ಲಿ ಕನಿಷ್ಠಪಕ್ಷ ಜಾಮೀನಿನ ಮೇಲಾದರೂ ಬಿಡಿಸಿಕೊಳ್ಳಬಹುದು- ವಿವಾಹ ಬಂಧನಕ್ಕೆ ಸಿಲುಕಿದರೆ ಪರಮಾತ್ಮನೇ ಕಾಪಾಡಬೇಕು!
***

ಮುಂದೆ ಓದಿ... »

ಮಾತು ಮಾತಿಗೂ ಹಂಗಿಸುವೆ

ಮಾತು ಮಾತಿಗೂ ಹಂಗಿಸುವೆ
ಉತ್ಸಾಹವನೇ ಭಂಗಿಸುವೆ
ಸರಿಯೇನೇ ಸರಿಯೇನೇ,
ನಿನ್ನೀ ಕೋಪದ ಪರಿಯೇನೆ?

ಮಾತಿನ ವ್ಯೂಹದಿ ಬಂಧಿಸುವೆ
ಜೀವದ ಮೋದವ ನಂದಿಸುವೆ
ಸರಿಯೇನೇ ಸರಿಯೇನೇ,
ಒಲವನೆ ಇರಿವುದು ತರವೇನೇ?

ಹಾಲಿಗೆ ಹುಳಿಯನು ಸೇರಿಸುವೆ
ಕೂಡಿದ ಧಾರೆಯ ಛೇದಿಸುವೆ
ಸರಿಯೇನೇ ಸರಿಯೇನೇ,
ಸ್ನೇಹಕೆ ಹೀಗೇ ಕೊನೆಯೇನೇ?

ವಾದಕೆ ಇಳಿಯುವ ಛಲ ಯಾಕೆ,
ಗೆದ್ದೇ ಗೆಲ್ಲುವ ಮದ ಏಕೆ?
ಹಮ್ಮಿನ ಗುಮ್ಮ ಸುಮ್ಮನೆ ಅಲ್ಲ
ನಮ್ಮನೆ ತಿನ್ನದೆ ಬಿಟ್ಟೀತೇ?
*****

ಮುಂದೆ ಓದಿ... »